FAQ

Family Link ಕುರಿತು ಪದೇಪದೇ ಕೇಳಲಾಗುವ ಕೆಲವು ಪ್ರಶ್ನೆಗಳಿಗೆ ನಾವು ಉತ್ತರಗಳನ್ನು ಸಂಗ್ರಹಿಸಿದ್ದೇವೆ. ನೀವು ಈಗಾಗಲೇ ಆ್ಯಪ್ ಅನ್ನು ಬಳಸುತ್ತಿದ್ದು, ಅದರ ಕುರಿತು ಯಾವುದೇ ಪ್ರಶ್ನೆಯನ್ನು ಹೊಂದಿದ್ದರೆ, ಹೆಚ್ಚಿನ ಮಾಹಿತಿಗಾಗಿ ನಮ್ಮ ಸಹಾಯ ಕೇಂದ್ರವನ್ನು ಪರಿಶೀಲಿಸಬಹುದು.

ಅದು ಹೇಗೆ ಕೆಲಸ ಮಾಡುತ್ತದೆ

Family Link ಹೇಗೆ ಕೆಲಸ ಮಾಡುತ್ತದೆ?

ಪೋಷಕರು ತಮ್ಮ ಮಗು ಅಥವಾ ಹದಿಹರೆಯದವರು Android ಮತ್ತು ChromeOS ಸಾಧನಗಳಾದ್ಯಂತ ಎಕ್ಸ್‌ಪ್ಲೋರ್ ಮಾಡುವಾಗ ಲೂಪ್‌ನಲ್ಲಿ ಉಳಿಯಲು ಮತ್ತು ಅವರನ್ನು ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಿಸಲು Google ನFamily Link ಸಹಾಯ ಮಾಡುತ್ತದೆ.

ಮೊದಲನೆಯದಾಗಿ, ಮಗು/ಹದಿಹರೆಯದವರಿಗೆ ಹೊಂದಾಣಿಕೆಯ ಸಾಧನದ ಅಗತ್ಯವಿರುತ್ತದೆ (ಯಾವ ಸಾಧನಗಳಲ್ಲಿ Family Link ಕೆಲಸ ಮಾಡುತ್ತದೆ ಎಂಬುದನ್ನು ಪರಿಶೀಲಿಸಿ). ನಂತರ, ಮಗು/ಹದಿಹರೆಯದವರನ್ನು ಸಾಧನದಲ್ಲಿ ಸೈನ್ ಇನ್ ಮಾಡಿ. ಈಗಾಗಲೇ Family Link ಮೂಲಕ ಮಗು/ಹದಿಹರೆಯದವರ ಮೇಲ್ವಿಚಾರಣೆಯನ್ನು ನಡೆಸಿದ್ದರೆ, ಸೈನ್-ಇನ್ ಅವರಿಗೆ ಪೋಷಕರ ನಿಯಂತ್ರಣಗಳನ್ನು ಸೆಟಪ್ ಮಾಡಲು ಸಹಾಯ ಮಾಡುತ್ತದೆ. ಈಗಾಗಲೇ Family Link ಮೂಲಕ ಹದಿಹರೆಯದವರ ಮೇಲ್ವಿಚಾರಣೆಯನ್ನು ಮಾಡಿರದಿದ್ದರೆ, ಪೋಷಕರು Android ಸೆಟ್ಟಿಂಗ್‌ಗಳಿಂದ ಸಹ Family Link ಅನ್ನು ಸೇರಿಸಬಹುದು.

ಪೋಷಕರು ತಮ್ಮ 13 ವರ್ಷದೊಳಗಿನ (ಅಥವಾ ಮ್ಮ ದೇಶದಲ್ಲಿ ಅನ್ವಯವಾಗುವ ವಯಸ್ಸು) ಮಗುವಿಗೂ ಸಹ Google ಖಾತೆಯನ್ನು ರಚಿಸಬಹುದು. ಪೂರ್ಣಗೊಂಡ ನಂತರ, ಮಕ್ಕಳು ತಮ್ಮ ಹೊಸ ಖಾತೆಯ ಮೂಲಕ ತಮ್ಮ ಸಾಧನದಲ್ಲಿ ಸೈನ್ ಇನ್ ಮಾಡಬಹುದು.

ಒಮ್ಮೆ ಖಾತೆಗಳನ್ನು ಲಿಂಕ್ ಮಾಡಿದ ನಂತರ, ಪೋಷಕರು ಅವರಿಗೆ ವೀಕ್ಷಣಾ ಅವಧಿಯ ಮೇಲೆ ಗಮನವಿಡಲು ಮತ್ತು ವಯಸ್ಸಿಗೆ ಸೂಕ್ತವಾದ ವಿಷಯಕ್ಕೆ ಕುರಿತು ತಮ್ಮ ಮಗುವಿಗೆ ಮಾರ್ಗದರ್ಶನ ನೀಡುವಂತಹ ಕೆಲಸಗಳನ್ನು ಮಾಡುವುದಕ್ಕೆ ಸಹಾಯ ಮಾಡಲು Family Link ಅನ್ನು ಬಳಸಬಹುದು.

ನನ್ನ ಮಕ್ಕಳಿಗೆ ಸೂಕ್ತವಲ್ಲದ ಎಲ್ಲಾ ವಿಷಯವನ್ನು Family Link ನಿರ್ಬಂಧಿಸುತ್ತದೆಯೇ?

Family Link ಅನುಚಿತವಾದ ವಿಷಯವನ್ನು ನಿರ್ಬಂಧಿಸುವುದಿಲ್ಲ, ಆದರೆ ಅದರಲ್ಲಿನ ಸೆಟ್ಟಿಂಗ್‌ಗಳು ನಿಮಗೆ ಫಿಲ್ಟರಿಂಗ್ ಆಯ್ಕೆಗಳನ್ನು ಒದಗಿಸುತ್ತವೆ. Search, Chrome ಮತ್ತು YouTube ನಂತಹ ಕೆಲವು Google ಆ್ಯಪ್‌ಗಳು ಫಿಲ್ಟರಿಂಗ್ ಆಯ್ಕೆಗಳನ್ನು ಹೊಂದಿವೆ ಮತ್ತು ಇವುಗಳನ್ನು ನೀವು Family Link ನಲ್ಲಿ ನೋಡಬಹುದು. ಈ ಫಿಲ್ಟರ್‌ಗಳು ಪರಿಪೂರ್ಣವಾಗಿರುವುದಿಲ್ಲ, ಹಾಗಾಗಿ ಕೆಲವೊಮ್ಮೆ ಮುಚ್ಚುಮರೆಯಿಲ್ಲದ ವಿಷಯ, ಗ್ರಾಫಿಕ್ ವಿಷಯ ಅಥವಾ ನಿಮ್ಮ ಮಗು ನೋಡಬಾರದೆಂದು ನೀವು ಬಯಸುವ ಇತರ ವಿಷಯಗಳು ಎದುರಾಗಬಹುದು ಎಂಬುದನ್ನು ಗಮನಿಸಿ. ನಿಮ್ಮ ಕುಟುಂಬಕ್ಕೆ ಯಾವುದು ಸೂಕ್ತ ಎಂಬುದನ್ನು ನಿರ್ಧರಿಸಲು, ಆ್ಯಪ್ ಸೆಟ್ಟಿಂಗ್‌ಗಳು ಮತ್ತು Family Link ಒದಗಿಸುವ ಸೆಟ್ಟಿಂಗ್‌ಗಳು ಹಾಗೂ ಪರಿಕರಗಳನ್ನು ಪರಿಶೀಲಿಸಬೇಕೆಂದು ನಾವು ಶಿಫಾರಸು ಮಾಡುತ್ತೇವೆ.

ಪೋಷಕರು Android ನಲ್ಲಿ Family Link ಬಳಸಬಹುದೇ?

ಹೌದು. Lollipop (5.0) ಮತ್ತು ಅದಕ್ಕಿಂತ ಹೆಚ್ಚಿನ ಆವೃತ್ತಿಯನ್ನು ಹೊಂದಿರುವ Android ಸಾಧನಗಳಲ್ಲಿ ಪೋಷಕರು Family Link ರನ್ ಮಾಡಬಹುದು.

ಪೋಷಕರು iOS ನಲ್ಲಿ Family Link ಬಳಸಬಹುದೇ?

ಹೌದು. iOS 11 ಅಥವಾ ಅದಕ್ಕಿಂತ ಹೆಚ್ಚಿನ ಆವೃತ್ತಿಯನ್ನು ರನ್ ಮಾಡುವ iPhone ಗಳಲ್ಲಿ ಪೋಷಕರು Family Link ಅನ್ನು ರನ್ ಮಾಡಬಹುದು.

ಪೋಷಕರು ವೆಬ್ ಬ್ರೌಸರ್‌ನಲ್ಲಿ Family Link ಬಳಸಬಹುದೇ?

ಪೋಷಕರು ಬಹುತೇಕ ತಮ್ಮ ಮಗುವಿನ ಎಲ್ಲಾ ಖಾತೆ ಸೆಟ್ಟಿಂಗ್‌ಗಳು ಮತ್ತು ವೈಶಿಷ್ಟ್ಯಗಳನ್ನು ವೆಬ್ ಬ್ರೌಸರ್‌ನಲ್ಲಿ ನಿರ್ವಹಿಸಬಲ್ಲರು. ಯಾವುದೇ ಆ್ಯಪ್ ಡೌನ್‌ಲೋಡ್ ಮಾಡುವ ಅಗತ್ಯವಿಲ್ಲ.

Android ಸಾಧನಗಳಲ್ಲಿ Family Link ಮೂಲಕ ಮಕ್ಕಳು ಅಥವಾ ಹದಿಹರೆಯದವರನ್ನು ಮೇಲ್ವಿಚಾರಣೆ ಮಾಡಬಹುದೇ?

ಅತ್ಯುತ್ತಮ ಫಲಿತಾಂಶಗಳಿಗಾಗಿ, Family Link ಮೂಲಕ ಮೇಲ್ವಿಚಾರಣೆಗೆ ಒಳಪಡುವ ಮಕ್ಕಳು ಅಥವಾ ಹದಿಹರೆಯದವರು ಆವೃತ್ತಿ 7.0 (Nougat) ಅಥವಾ ಅದಕ್ಕಿಂತ ಹೆಚ್ಚಿನ ಆವೃತ್ತಿಯನ್ನು ರನ್ ಮಾಡುವ Android ಸಾಧನಗಳನ್ನು ಬಳಸಲು ನಾವು ಶಿಫಾರಸು ಮಾಡುತ್ತೇವೆ. Android ಆವೃತ್ತಿಗಳಾದ 5.0 ಮತ್ತು 6.0 (Lollipop ಮತ್ತು Marshmallow) ರನ್ ಆಗುತ್ತಿರುವ ಸಾಧನಗಳಿಗೂ ಸಹ Family Link ಸೆಟ್ಟಿಂಗ್‌ಗಳನ್ನು ಅನ್ವಯಿಸಲು ಸಾಧ್ಯವಾಗುತ್ತದೆ. ಇನ್ನಷ್ಟು ತಿಳಿಯಲು, ನಮ್ಮ ಸಹಾಯ ಕೇಂದ್ರಕ್ಕೆ ಭೇಟಿ ನೀಡಿ.

Chromebook (ChromeOS) ನಲ್ಲಿ Family Link ಮೂಲಕ ಮಕ್ಕಳು ಅಥವಾ ಹದಿಹರೆಯದವರನ್ನು ಮೇಲ್ವಿಚಾರಣೆ ಮಾಡಬಹುದೇ?

ಹೌದು, ಮಕ್ಕಳು ಮತ್ತು ಹದಿಹರೆಯದವರು Chromebook ಗಳಲ್ಲಿ ತಮ್ಮ Google ಖಾತೆಗೆ ಸೈನ್ ಇನ್ ಮಾಡಿದಾಗ ಮೇಲ್ವಿಚಾರಣೆ ಮಾಡಬಹುದು. ಪೋಷಕರು ತಮ್ಮ ಮಗುವಿನ Chromebook ಮತ್ತು ಖಾತೆ ಸೆಟ್ಟಿಂಗ್‌ಗಳನ್ನು ನಿರ್ವಹಿಸುವುದು ಮತ್ತು ವೆಬ್‌ಸೈಟ್ ನಿರ್ಬಂಧಗಳನ್ನು ಸೆಟ್ ಮಾಡುವಂತಹ ಕೆಲಸಗಳನ್ನು ಮಾಡಬಹುದು. ಇಲ್ಲಿ ಇನ್ನಷ್ಟು ತಿಳಿಯಿರಿ.

iOS ಸಾಧನಗಳು ಮತ್ತು ವೆಬ್ ಬ್ರೌಸರ್‌ಗಳಲ್ಲಿ Family Link ಮೂಲಕ ಮಕ್ಕಳು ಅಥವಾ ಹದಿಹರೆಯದವರನ್ನು ಮೇಲ್ವಿಚಾರಣೆ ಮಾಡಬಹುದೇ?

iOS, ವೆಬ್ ಬ್ರೌಸರ್‌ಗಳು ಅಥವಾ ಇತರ ಮೇಲ್ವಿಚಾರಣೆ ಮಾಡದಿರುವ ಸಾಧನಗಳಿಗೆ ಸೈನ್ ಇನ್ ಮಾಡಿರುವ ಮಕ್ಕಳು ಅಥವಾ ಹದಿಹರೆಯದವರನ್ನು ಭಾಗಶಃ ಮಾತ್ರ ಮೇಲ್ವಿಚಾರಣೆ ಮಾಡಬಹುದು. ಮಕ್ಕಳು ಮತ್ತು ಹದಿಹರೆಯದವರು ತಮ್ಮ ಪೋಷಕರ ಸಮ್ಮತಿಯೊಂದಿಗೆ, iOS ಸಾಧನಗಳು ಮತ್ತು ವೆಬ್ ಬ್ರೌಸರ್‌ಗಳಲ್ಲಿ ತಮ್ಮ Google ಖಾತೆಗೆ ಸೈನ್ ಇನ್ ಮಾಡಬಹುದು. YouTube ಮತ್ತು Google Search ನಲ್ಲಿ ಪೋಷಕರು ತಮ್ಮ ಮಗುವಿನ ಕೆಲವು ಖಾತೆ ಸೆಟ್ಟಿಂಗ್‌ಗಳನ್ನು ನಿರ್ವಹಿಸುವುದನ್ನು ಮುಂದುವರಿಸಬಹುದು ಮತ್ತು ಆ ಸೆಟ್ಟಿಂಗ್‌ಗಳು ಮಗು ಸೈನ್ ಇನ್ ಮಾಡಿದಾಗ ಮತ್ತು iOS ಸಾಧನ ಅಥವಾ ವೆಬ್‌ನಲ್ಲಿ Google ಆ್ಯಪ್‌ಗಳು ಮತ್ತು ಸೇವೆಗಳನ್ನು ಬಳಸುವಾಗ ಅನ್ವಯಿಸುತ್ತವೆ. ನಿಮ್ಮ ಮಕ್ಕಳು ಬಳಸಬಹುದಾದ ಆ್ಯಪ್‌ಗಳನ್ನು ನಿರ್ವಹಿಸುವುದು, Chrome ನಲ್ಲಿ ಅವರು ನೋಡುವುದನ್ನು ಫಿಲ್ಟರ್ ಮಾಡುವುದು ಮತ್ತು ವೀಕ್ಷಣಾ ಅವಧಿಯ ಮಿತಿಗಳನ್ನು ಸೆಟ್ ಮಾಡುವಂತಹ Family Link ಆ್ಯಪ್‌ನಲ್ಲಿರುವ ಇತರ ವೈಶಿಷ್ಟ್ಯಗಳು, iOS ಸಾಧನ ಅಥವಾ ವೆಬ್‌ನಲ್ಲಿನ ಮಗುವಿನ ಚಟುವಟಿಕೆಗಳಿಗೆ ಅನ್ವಯಿಸುವುದಿಲ್ಲ. iOS ಸಾಧನಗಳು ಮತ್ತು ವೆಬ್ ಬ್ರೌಸರ್‌ಗಳಲ್ಲಿನ ಮಕ್ಕಳ/ಹದಿಹರೆಯದವರ ಸೈನ್ ಇನ್ ಕುರಿತು ಇನ್ನಷ್ಟು ತಿಳಿಯಿರಿ.

ಮಗುವಿನ ಸಾಧನ ಮತ್ತು Google ಖಾತೆಯನ್ನು ಸೆಟಪ್ ಮಾಡಲು ಎಷ್ಟು ಸಮಯ ಬೇಕಾಗುತ್ತದೆ?

ನಿಮ್ಮ ಮಗುವಿನ Google ಖಾತೆ ಹಾಗೂ Android ಸಾಧನವನ್ನು ಸೆಟಪ್ ಮಾಡಲು ನೀವು ಸುಮಾರು 15 ನಿಮಿಷಗಳಷ್ಟು ಸಮಯವನ್ನು ಮೀಸಲಿಡಬೇಕಾಗುತ್ತದೆ.

ಖಾತೆಗಳು

Family Link ಮೂಲಕ ನಿರ್ವಹಿಸುವ Google ಖಾತೆಯನ್ನು ಹೊಂದಲು ಮಗುವಿಗೆ ಕನಿಷ್ಠ ವಯಸ್ಸಿನ ಮಿತಿ ಇದೆಯೇ?

ಇಲ್ಲ. ನಿಮ್ಮ ಮಗು ತಮ್ಮ ಮೊದಲನೇ Android ಅಥವಾ ChromeOS ಸಾಧನವನ್ನು ಪಡೆದುಕೊಳ್ಳಲು ಯಾವಾಗ ಅರ್ಹರಾಗುತ್ತಾರೆ ಎಂಬುದನ್ನು ನಿರ್ಧರಿಸುವುದು ನಿಮಗೆ ಬಿಟ್ಟಿದ್ದು.

ನನ್ನ ಮಗು ತನ್ನ Google ಖಾತೆಗೆ ಸೈನ್ ಇನ್ ಮಾಡಿದಾಗ, ಜಾಹೀರಾತುಗಳನ್ನು ನೋಡುತ್ತದೆಯೇ?

Google ನ ಸೇವೆಗಳು ಜಾಹೀರಾತುಗಳನ್ನು ಆಧರಿಸಿವೆ ಮತ್ತು ನಮ್ಮ ಉತ್ಪನ್ನಗಳನ್ನು ಬಳಸುವಾಗ ನಿಮ್ಮ ಮಗು ಜಾಹೀರಾತುಗಳನ್ನು ನೋಡಬಹುದು. ಆದರೆ, ಅವರು ವೈಯಕ್ತೀಕರಿಸಿದ ಜಾಹೀರಾತುಗಳನ್ನು ನೋಡುವುದಿಲ್ಲ ಮತ್ತು ಆ್ಯಪ್‌ಗಳಲ್ಲಿ ಮಗು ಯಾವಾಗ ಜಾಹೀರಾತುಗಳನ್ನು ನೋಡುತ್ತಿದೆ ಎಂಬುದನ್ನು ಗುರುತಿಸಲು ನಿಮಗೆ ಪರಿಕರಗಳನ್ನು ಒದಗಿಸಲಾಗುತ್ತದೆ.

ನನ್ನ ಹದಿಹರೆಯದ ಮಗುವಿನ ಮೇಲ್ವಿಚಾರಣೆಗಾಗಿ ನಾನು Family Link ಬಳಸಬಹುದೇ?

ಹೌದು, ಹದಿಹರೆಯದವರನ್ನು ಮೇಲ್ವಿಚಾರಣೆ ಮಾಡಲು Family Link ಬಳಸಬಹುದು (13 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಅಥವಾ ನಿಮ್ಮ ದೇಶದಲ್ಲಿ ಸಮ್ಮತಿ ನೀಡಲು ಮಾನ್ಯವಾದ ಅರ್ಹ ವಯಸ್ಸು). ಸಮ್ಮತಿ ನೀಡಲು ಮಾನ್ಯವಾದ ವಯಸ್ಸಿನ ಒಳಗಿರುವ ಮಕ್ಕಳಿಗಿಂತ ಭಿನ್ನವಾಗಿ, ಹದಿಹರೆಯದವರಿಗೆ ಯಾವಾಗ ಬೇಕಾದರೂ ಮೇಲ್ವಿಚಾರಣೆಯನ್ನು ನಿಲ್ಲಿಸುವ ಸಾಮರ್ಥ್ಯವಿರುತ್ತದೆ. ಆದರೆ ಅವರೇನಾದರೂ ಮೇಲ್ವಿಚಾರಣೆಯನ್ನು ನಿಲ್ಲಿಸಿದರೆ, ನಿಮಗೆ ಸೂಚನೆ ನೀಡಲಾಗುತ್ತದೆ ಮತ್ತು ನೀವು ಅನ್‌ಲಾಕ್ ಮಾಡದ ಹೊರತು ಅವರ Android ಸಾಧನವನ್ನು 24 ಗಂಟೆಗಳ ಕಾಲ ತಾತ್ಕಾಲಿಕವಾಗಿ ಲಾಕ್ ಮಾಡಲಾಗುತ್ತದೆ. ಪೋಷಕರಾಗಿ, ಹದಿಹರೆಯದವರಿಗೆ ಅವರ ಸಾಧನದ ಬಳಕೆಯ ಮೇಲೆ ಯಾವುದೇ ಪರಿಣಾಮ ಬೀರದಂತೆ ಯಾವಾಗ ಬೇಕಾದರೂ ಮೇಲ್ವಿಚಾರಣೆಯನ್ನು ತೆಗೆದುಹಾಕಲು ನೀವು ಆಯ್ಕೆಮಾಡಬಹುದು.

ಶಾಲೆ ಅಥವಾ ಕಚೇರಿಯಲ್ಲಿ ನನಗೆ ದೊರೆತ ಖಾತೆಯನ್ನು, ನನ್ನ ಕುಟುಂಬವನ್ನು ನಿರ್ವಹಿಸುವುದಕ್ಕಾಗಿ ನಾನು ಬಳಸಬಹುದೇ?

ಇಲ್ಲ. Family Link ಬಳಸಿ ಕುಟುಂಬ ಗುಂಪನ್ನು ನಿರ್ವಹಿಸಲು ಅಥವಾ ಮೇಲ್ವಿಚಾರಣೆಯನ್ನು ನಿರ್ವಹಿಸಲು ಕೆಲಸ ಸ್ಥಳದಲ್ಲಿ ಅಥವಾ ಶಾಲೆಯು ಒದಗಿಸಲಾದ ಖಾತೆಗಳನ್ನು ಬಳಸಲಾಗುವುದಿಲ್ಲ. ನಿಮ್ಮ Gmail ಖಾತೆಯಂತಹ ವೈಯಕ್ತಿಕ Google ಖಾತೆಯನ್ನು ನೀವು Family Link ಜೊತೆಗೆ ಬಳಸಬಹುದು.

ಮಕ್ಕಳು ತಮ್ಮ ಮೇಲ್ವಿಚಾರಣೆಯ ಸಾಧನಗಳಲ್ಲಿ ಬಹು Google ಖಾತೆಗಳನ್ನು ಸೇರಿಸಬಹುದೇ?

ಸಾಮಾನ್ಯವಾಗಿ ಇಲ್ಲ. ಮಕ್ಕಳಿಗೆ ತಮ್ಮ ವೈಯಕ್ತಿಕ ಮೇಲ್ವಿಚಾರಣೆಯ Google ಖಾತೆಯ ಜೊತೆಗೆ Google Workspace for Education ಖಾತೆಯನ್ನು ಮಾತ್ರ ಸೇರಿಸಲು ಅನುಮತಿಸಲಾಗಿದೆ. ಈ ನಿರ್ಬಂಧನೆಯು ಉತ್ಪನ್ನದ ಪ್ರಮುಖ ನಡವಳಿಕೆಗಳನ್ನು ನಿರ್ವಹಿಸಲು ನಮಗೆ ಸಹಾಯ ಮಾಡುತ್ತದೆ. ಉದಾಹರಣೆಗೆ, ಸಾಧನದಲ್ಲಿ ಇನ್ನೊಂದು ಖಾತೆಯಿದ್ದರೆ, ಪೋಷಕರ ಅನುಮೋದನೆ ಇಲ್ಲದೆ Play ನಿಂದ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಲು ಮಕ್ಕಳು ಆ ಖಾತೆಗೆ ಬದಲಿಸಿಕೊಳ್ಳಬಹುದು.

ನನ್ನ ಮಗುವಿಗೆ 13 ವರ್ಷ ವಯಸ್ಸಾದಾಗ (ಅಥವಾ ನಿಮ್ಮ ದೇಶದಲ್ಲಿನ ಅರ್ಹ ವಯಸ್ಸು) ಏನಾಗುತ್ತದೆ?

ನಿಮ್ಮ ಮಗುವಿಗೆ 13 ವರ್ಷ ವಯಸ್ಸಾದಾಗ (ಅಥವಾ ನಿಮ್ಮ ದೇಶದಲ್ಲಿ ಅನ್ವಯವಾಗುವ ವಯಸ್ಸು), ಅವರು ಮೇಲ್ವಿಚಾರಣೆ ಮಾಡದ Google ಖಾತೆಗೆ ಬಡ್ತಿ ಪಡೆಯುವ ಆಯ್ಕೆಯನ್ನು ಹೊಂದಿರುತ್ತಾರೆ. ಮಗುವಿನ 13 ನೇ ಜನ್ಮದಿನದಂದು ಅವರು ತಮ್ಮ ಖಾತೆಯ ನಿಯಂತ್ರಣವನ್ನು ಪಡೆಯಲು ಅರ್ಹರಾಗಿರುತ್ತಾರೆ, ಆನಂತರ ಪೋಷಕರು ಅವರ ಖಾತೆಯನ್ನು ನಿರ್ವಹಿಸುವಂತಿಲ್ಲ ಎಂದು ತಿಳಿಸುವ ಇಮೇಲ್ ಒಂದನ್ನು, ಮಗುವಿಗೆ 13 ವರ್ಷವಾಗುವ ಮುಂಚೆಯೇ ಪೋಷಕರು ಪಡೆಯುತ್ತಾರೆ. ಮಕ್ಕಳಿಗೆ 13 ವರ್ಷವಾದ ದಿನದಂದು, ಅವರು ತಮ್ಮ Google ಖಾತೆಯನ್ನು ತಾವೇ ನಿರ್ವಹಿಸಲು ಬಯಸುತ್ತಾರೆಯೇ ಅಥವಾ ತಮ್ಮ ಪೋಷಕರು ಖಾತೆಯನ್ನು ತಮಗಾಗಿ ನಿರ್ವಹಿಸುವುದನ್ನು ಮುಂದುವರಿಸುತ್ತಾರೆಯೇ ಎಂಬುದನ್ನು ಮಕ್ಕಳು ತಾವೇ ಆಯ್ಕೆ ಮಾಡಿಕೊಳ್ಳಬಹುದು. ಪೋಷಕರಾಗಿ, ಮಗುವಿಗೆ 13 ವರ್ಷಕ್ಕಿಂತ ಹೆಚ್ಚು ವಯಸ್ಸಾದಾಗ ನೀವು ಯಾವಾಗ ಬೇಕಾದರೂ ಮೇಲ್ವಿಚಾರಣೆಯನ್ನು ತೆಗೆದುಹಾಕಲು ಆಯ್ಕೆಮಾಡಬಹುದು.

ಎಲ್ಲವೂ ಸಿದ್ಧವಾಗಿದೆಯೇ? ಆ್ಯಪ್ ಪಡೆದುಕೊಳ್ಳಿ.

ನಿಮ್ಮ ಮಗು ಏನನ್ನು ನೋಡುತ್ತಿದೆ ಎಂಬ ಮಾಹಿತಿ ಪಡೆಯಲು ನಿಮ್ಮ ಸಾಧನಕ್ಕೆ Family Link ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ.

ಸ್ಮಾರ್ಟ್ ಫೋನ್ ಅನ್ನು ಹೊಂದಿಲ್ಲವೇ?

ನೀವು ಆನ್‌ಲೈನ್‌ನಲ್ಲಿ ಮೇಲ್ವಿಚಾರಣೆಯನ್ನು ಸೆಟ್ ಮಾಡಬಹುದು.
ಇನ್ನಷ್ಟು ತಿಳಿಯಿರಿ