ವಯಸ್ಸು 6-8
ವಯಸ್ಸು 9-12
ವಯಸ್ಸು 13-17

Google ನಲ್ಲಿ ನಿಮ್ಮ ಗೌಪ್ಯತೆಯ ಬಗ್ಗೆ ತಿಳಿಯಲು ಬಯಸುವಿರಾ?

ನೀವು ಸರಿಯಾದ ಸ್ಥಳಕ್ಕೆ ಬಂದಿದ್ದೀರಿ! ನಿಮ್ಮ ಪೋಷಕರು ನಿಮ್ಮ Google ವಿಷಯದ ಕುರಿತು ಹೇಗೆ ಸಹಾಯ ಮಾಡಬಹುದು, Google ಯಾವ ಮಾಹಿತಿಯನ್ನು ಬಳಸುತ್ತದೆ ಮತ್ತು ಇನ್ನಷ್ಟು ವಿಷಯದ ಕುರಿತು ಮಕ್ಕಳು ಹೆಚ್ಚಾಗಿ ಕೇಳುವ ಪ್ರಶ್ನೆಗಳನ್ನು ಓದಿ.

ಪೋಷಕರೇ, ಈ ಮಾಹಿತಿಯು 13 ವರ್ಷದೊಳಗಿನ (ಅಥವಾ ನಿಮ್ಮ ದೇಶದಲ್ಲಿ ಅನ್ವಯಿಸುವ ವಯಸ್ಸು) ಮಕ್ಕಳಿಗಾಗಿFamily Link ಮೂಲಕ ನಿರ್ವಹಿಸಲಾಗುವ Google ಖಾತೆಗಳಿಗೆ, ಮಾತ್ರ ಅನ್ವಯಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ, ನಮ್ಮ ಗೌಪ್ಯತೆ ಸೂಚನೆ ಮತ್ತು ಗೌಪ್ಯತೆ ನೀತಿಯನ್ನು ನೋಡಿ.

ನನ್ನ ಖಾತೆಯ ಉಸ್ತುವಾರಿ ಯಾರು?

ನಿಮ್ಮ ಪೋಷಕರು ನಿಮ್ಮ Google ಖಾತೆಯನ್ನು ನೋಡಿಕೊಳ್ಳುತ್ತಾರೆ. ಅದರ ನಿರ್ವಹಣೆಗೆ ಸಹಾಯವಾಗಲು ಅವರು Family Link ಆ್ಯಪ್ ಅನ್ನು ಬಳಸಬಹುದು. ನೀವು ವಯಸ್ಕರಾದಾಗ, ನಿಮ್ಮ ಖಾತೆಯನ್ನು ನೀವು ನಿರ್ವಹಿಸಬಹುದು.

ನಿಮ್ಮ ಪೋಷಕರು ಇವುಗಳನ್ನು ಮಾಡಬಹುದು:

  • ನಿಮ್ಮ ಖಾತೆಗೆ ಸೈನ್ ಇನ್ ಮಾಡಿ, ನಿಮ್ಮ ಖಾತೆಯ ಪಾಸ್‌ವರ್ಡ್ ಬದಲಾಯಿಸುವುದು ಅಥವಾ ನಿಮ್ಮ ಖಾತೆಯನ್ನು ಅಳಿಸುವುದು.
  • ನಿಮ್ಮ ಫೋನ್ ಅಥವಾ ಟ್ಯಾಬ್ಲೆಟ್ ಅನ್ನು ಲಾಕ್ ಮಾಡುವುದು.
  • ನಿಮ್ಮ ಫೋನ್ ಅಥವಾ ಟ್ಯಾಬ್ಲೆಟ್ ಎಲ್ಲಿದೆ ಎಂದು ನೋಡುವುದು.
  • ನೀವು ಯಾವ ಆ್ಯಪ್‌ಗಳನ್ನು ಬಳಸಬಹುದು ಎಂಬುದನ್ನು ಆಯ್ಕೆ ಮಾಡುವುದು.
  • ನಿಮ್ಮ ಆ್ಯಪ್‌ಗಳನ್ನು ನೀವು ಎಷ್ಟು ಸಮಯ ಬಳಸುತ್ತೀರಿ ಎಂಬುದನ್ನು ನೋಡುವುದು.
  • Google Search, YouTube ಅಥವಾ Google Play ನಂತಹ ಕೆಲವು Google ಆ್ಯಪ್‌ಗಳಲ್ಲಿ ನೀವು ನೋಡುವ ವಿಷಯಗಳನ್ನು ಬದಲಾಯಿಸುವುದು.
  • ನಿಮ್ಮ ಚಟುವಟಿಕೆ ನಿಯಂತ್ರಣಗಳನ್ನು ಆರಿಸುವುದು (ಇವುಗಳು ನೀವು Google ನಲ್ಲಿ ಏನೆಲ್ಲಾ ಮಾಡುತ್ತೀರಿ ಎಂಬುದರ ಕುರಿತು ಮಾಹಿತಿಯನ್ನು ಉಳಿಸುವ ಸೆಟ್ಟಿಂಗ್‌ಗಳಾಗಿವೆ).
  • ನಿಮ್ಮ ಆ್ಯಪ್‌ಗಳಿಗಾಗಿ ಸೆಟ್ಟಿಂಗ್‌ಗಳು ಮತ್ತು ಅನುಮತಿಗಳನ್ನು ಆರಿಸುವುದು.
  • ನಿಮ್ಮ ಖಾತೆಗಾಗಿ ಹೆಸರು, ಹುಟ್ಟುಹಬ್ಬ ಮತ್ತು ಇತರ ಮಾಹಿತಿಯನ್ನು ಆರಿಸುವುದು.
  • Google Play ನಂತಹ ಕೆಲವು Google ಉತ್ಪನ್ನಗಳಲ್ಲಿ ನೀವು ಏನನ್ನು ಡೌನ್‌ಲೋಡ್ ಮಾಡಬಹುದು ಅಥವಾ ಖರೀದಿಸಬಹುದು ಎಂಬುದನ್ನು ಆರಿಸುವುದು.

Google ನನ್ನ ಮಾಹಿತಿಯನ್ನು ಹೇಗೆ ಮತ್ತು ಏಕೆ ಬಳಸುತ್ತದೆ?

ನೀವು ಅಥವಾ ನಿಮ್ಮ ಪೋಷಕರು ನಮಗೆ ಒದಗಿಸಿದ, ನಿಮ್ಮ ಹೆಸರು ಮತ್ತು ಜನ್ಮದಿನದಂತಹ ಮಾಹಿತಿಯನ್ನು ನಾವು ಉಳಿಸಬಹುದು. ನೀವು ನಮ್ಮ ಆ್ಯಪ್‌ಗಳು ಮತ್ತು ಸೈಟ್‌ಗಳನ್ನು ಬಳಸುವಾಗ ನಾವು ಮಾಹಿತಿಯನ್ನು ಉಳಿಸುತ್ತೇವೆ. ಈ ಮಾಹಿತಿಯನ್ನು ಸುರಕ್ಷಿತವಾಗಿಡಲು ನಾವು ಕಷ್ಟಪಟ್ಟು ಕೆಲಸ ಮಾಡುತ್ತೇವೆ, ಮತ್ತು ನಾವು ಇದನ್ನು Google ಆ್ಯಪ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ಹೆಚ್ಚು ಸಹಾಯ ಮಾಡುವಂತಹ ವಿವಿಧ ಕಾರಣಗಳಿಗಾಗಿ ಬಳಸುತ್ತೇವೆ.

ನಿಮ್ಮ ಪೋಷಕರ ಜೊತೆಯಲ್ಲಿ, ನಿಮ್ಮ ಮಾಹಿತಿಯನ್ನು ನಾವು ಬಳಸಬಹುದಾದ ಕೆಲವು ವಿಧಾನಗಳ ಬಗ್ಗೆ ಇನ್ನಷ್ಟು ತಿಳಿಯಿರಿ:

  • ನಮ್ಮ ಆ್ಯಪ್‌ಗಳು ಮತ್ತು ಸೈಟ್‌ಗಳನ್ನು ಕೆಲಸ ಮಾಡುವಂತೆ ಮಾಡಲು:ಉದಾಹರಣೆಗೆ, ನೀವು Google ಹುಡುಕಾಟದಲ್ಲಿ "ನಾಯಿಮರಿಗಳು" ಎಂದು ಹುಡುಕಿದರೆ, ನಾವು ನಿಮ್ಮ ಮಾಹಿತಿಯನ್ನು ನಾಯಿಮರಿಗಳ ಬಗ್ಗೆ ತೋರಿಸಲು ಬಳಸುತ್ತೇವೆ.
  • ನಮ್ಮ ಆ್ಯಪ್‌ಗಳು ಮತ್ತು ಸೈಟ್‌ಗಳನ್ನು ಉತ್ತಮವಾಗಿ ಮಾಡಲು: ಉದಾಹರಣೆಗೆ, ಏನಾದರೂ ದೋಷ ಕಂಡುಬಂದರೆ, ಅದನ್ನು ಸರಿಪಡಿಸಲು ನಾವು ಮಾಹಿತಿಯನ್ನು ಬಳಸಬಹುದು.
  • Google, ನಮ್ಮ ಬಳಕೆದಾರರು ಮತ್ತು ಸಾರ್ವಜನಿಕರನ್ನು ರಕ್ಷಿಸಲು: ಆನ್‌ಲೈನ್‌ನಲ್ಲಿ ಜನರನ್ನು ಸುರಕ್ಷಿತವಾಗಿರಿಸಲು ನಾವು ಮಾಹಿತಿಯನ್ನು ಬಳಸುತ್ತೇವೆ.
  • ಹೊಸ ಆ್ಯಪ್‌ಗಳು ಮತ್ತು ಸೈಟ್‌ಗಳನ್ನು ನಿರ್ಮಿಸಲು: ನಾವು ನಿರ್ಮಿಸಬಹುದಾದ ಹೊಸ Google ವಸ್ತುಗಳ ಬಗ್ಗೆ ಕಲ್ಪನೆಗಳನ್ನು ಪಡೆಯಲು ಜನರು ನಮ್ಮ ಪ್ರಸ್ತುತ ಆ್ಯಪ್‌ಗಳು ಮತ್ತು ಸೈಟ್‌ಗಳನ್ನು ಹೇಗೆ ಬಳಸುತ್ತಾರೆ ಎಂಬುದನ್ನು ನಾವು ತಿಳಿದುಕೊಳ್ಳಲು.
  • ನೀವು ಇಷ್ಟಪಡಬಹುದಾದ ವಿಷಯಗಳನ್ನು ತೋರಿಸಲು: ಉದಾಹರಣೆಗೆ, ನೀವು YouTube Kids ನಲ್ಲಿ ಪ್ರಾಣಿಗಳ ವೀಡಿಯೋಗಳನ್ನು ನೋಡಲು ಬಯಸಿದರೆ, ನಾವು ನಿಮಗೆ ಇನ್ನಷ್ಟು ತೋರಿಸಬಹುದು.
  • ನೀವು ಬಳಸುತ್ತಿರುವ ಸೈಟ್‌ನಂತಹ ವಿಷಯಗಳನ್ನು ಆಧರಿಸಿ ನಿಮಗೆ ಜಾಹೀರಾತುಗಳನ್ನು ತೋರಿಸಲು.
  • ನಿಮ್ಮೊಂದಿಗೆ ಸಂವಹನ ಮಾಡಲು: ಉದಾಹರಣೆಗೆ, ನಿಮಗೆ ಸಂದೇಶ ಕಳುಹಿಸಲು ನಾವು ನಿಮ್ಮ ಇಮೇಲ್ ವಿಳಾಸವನ್ನು ಬಳಸಬಹುದು. ನಿಮಗೆ ಪರಿಚಯವಿಲ್ಲದವರಿಂದ ಬರುವ ಸಂದೇಶವನ್ನು ತೆರೆಯುವ ಮೊದಲು, ನಿಮ್ಮ ಪೋಷಕರನ್ನು ಕೇಳಲು ಮರೆಯದಿರಿ.

ಏನನ್ನು ಉಳಿಸಬೇಕೆಂದು ನಾನು Google ಗೆ ಹೇಳಬಹುದೇ?

ಹೌದು, ನಿಮ್ಮ ಕುರಿತು ನಾವು ಉಳಿಸುವ ಕೆಲವು ವಿಷಯಗಳನ್ನು ನೀವು ಬದಲಾಯಿಸಬಹುದು. ಚಟುವಟಿಕೆ ನಿಯಂತ್ರಣಗಳಂತಹ ನಿಮ್ಮ ಕೆಲವು ಗೌಪ್ಯತೆ ಸೆಟ್ಟಿಂಗ್‌ಗಳಿಗೆ ನೀವು ಬದಲಾವಣೆಗಳನ್ನು ಮಾಡಿದರೆ, ನಾವು ನಿಮ್ಮ ಪೋಷಕರಿಗೆ ತಿಳಿಸುತ್ತೇವೆ. ಅವರು ನಿಮ್ಮ ಸೆಟ್ಟಿಂಗ್‌ಗಳನ್ನು ಬದಲಾಯಿಸಲು, ಸಹ ನಿಮಗೆ ಸಹಾಯ ಮಾಡಬಹುದು.

ನಿಮ್ಮ ಮತ್ತು ನಿಮ್ಮ Google ಖಾತೆಯ ಕುರಿತು ಕೆಲವು ಮಾಹಿತಿಯನ್ನು ನೀವು ಮತ್ತು ನಿಮ್ಮ ಪೋಷಕರು ಯಾವಾಗಲೂ ನೋಡಬಹುದು ಮತ್ತು ನಿರ್ವಹಿಸಬಹುದು.

Google ಎಂದಾದರೂ ನನ್ನ ವೈಯಕ್ತಿಕ ಮಾಹಿತಿಯನ್ನು ಇತರರೊಂದಿಗೆ ಹಂಚಿಕೊಳ್ಳುತ್ತದೆಯೇ?

Google ನ ಹೊರಗೆ ನಿಮ್ಮ ಹೆಸರಿನಂತಹ ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ಹಂಚಿಕೊಳ್ಳಲು ಕೆಲವು ಕಾರಣಗಳಿವೆ. ನಾವು ಈ ಮಾಹಿತಿಯನ್ನು ಹಂಚಿಕೊಂಡರೆ, ಅದನ್ನು ರಕ್ಷಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ.

ನಾವು ಕೆಲವು ವೈಯಕ್ತಿಕ ಮಾಹಿತಿಯನ್ನು ಇವರುಗಳೊಂದಿಗೆ ಹಂಚಿಕೊಳ್ಳಬಹುದು:

  • Google ನಲ್ಲಿ ನಿಮ್ಮ ಪೋಷಕರು ಮತ್ತು ಕುಟುಂಬ ಗುಂಪಿನ ಜೊತೆಗೆ
  • ನಾವು ಕೆಲಸ ಮಾಡುವ ಕಂಪನಿಗಳ ಜೊತೆಗೆ
  • ಹಂಚಿಕೊಳ್ಳಲು ತೊಂದರೆಯಿಲ್ಲ ಎಂದು ನಿಮ್ಮ ಪೋಷಕರು ನಮಗೆ ಹೇಳಿದಾಗ
  • ಕಾನೂನಿನ ಕಾರಣಗಳಿಗಾಗಿ ನಮಗೆ ಬೇಕಾದಾಗ

ನಾನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳುವುದನ್ನು ಬೇರೆ ಯಾರು ನೋಡಬಹುದು?

ಇಮೇಲ್‌ಗಳು ಅಥವಾ ಫೋಟೋಗಳಂತಹ ನೀವು ಆನ್‌ಲೈನ್‌ನಲ್ಲಿ ಹಂಚಿಕೊಳ್ಳುವ ಯಾವುದನ್ನಾದರೂ ಬಹಳಷ್ಟು ಜನರು ನೋಡಬಹುದು. ನೀವು ನಂಬುವ ಜನರ ಜೊತೆಗೆ ಮಾತ್ರ ಹಂಚಿಕೊಳ್ಳಿ. ನಿಮಗೆ ಖಚಿತವಿಲ್ಲದಿದ್ದರೆ, ಪೋಷಕರು ಅಥವಾ ಕುಟುಂಬದ ಸದಸ್ಯರನ್ನು ಕೇಳಿ.

ಇನ್ನಷ್ಟು ತಿಳಿಯಲು ಬಯಸುವಿರಾ? ನಮ್ಮ ಗೌಪ್ಯತೆ ನೀತಿ ಅನ್ನು ಓದಲು ನಿಮಗೆ ಸಹಾಯ ಮಾಡಲು ನಿಮ್ಮ ಪೋಷಕರನ್ನು ಕೇಳಿ.

Google ನಲ್ಲಿ ನಿಮ್ಮ ಗೌಪ್ಯತೆಯ ಬಗ್ಗೆ ತಿಳಿಯಲು ಬಯಸುವಿರಾ?

ನೀವು ಸರಿಯಾದ ಸ್ಥಳಕ್ಕೆ ಬಂದಿದ್ದೀರಿ! ನೀವು ನಮ್ಮ ಆ್ಯಪ್‌ಗಳು ಮತ್ತು ಸೈಟ್‌ಗಳನ್ನು ಬಳಸುವಾಗ Google ಹೇಗೆ ಮಾಹಿತಿಯನ್ನು ಸಂಗ್ರಹಿಸುತ್ತದೆ ಮತ್ತು ಬಳಸುತ್ತದೆ ಎಂಬುದನ್ನು ನೀವು ಇಲ್ಲಿ ತಿಳಿಯಬಹುದಾಗಿದೆ. ನಿಮ್ಮ Google ಖಾತೆ ಮತ್ತು ಸಾಧನಗಳನ್ನು ನಿರ್ವಹಿಸಲು ನಿಮ್ಮ ಪೋಷಕರು ಹೇಗೆ ಸಹಾಯ ಮಾಡಬಹುದು ಎಂಬುದನ್ನು ಸಹ ನೀವು ತಿಳಿಯುತ್ತೀರಿ.

ಪೋಷಕರೇ, ಈ ಮಾಹಿತಿಯು 13 ವರ್ಷದೊಳಗಿನ (ಅಥವಾ ನಿಮ್ಮ ದೇಶದಲ್ಲಿ ಅನ್ವಯಿಸುವ ವಯಸ್ಸು) ಮಕ್ಕಳಿಗಾಗಿFamily Link ಮೂಲಕ ನಿರ್ವಹಿಸಲಾಗುವ Google ಖಾತೆಗಳಿಗೆ, ಮಾತ್ರ ಅನ್ವಯಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ, ನಮ್ಮ ಗೌಪ್ಯತೆ ಸೂಚನೆ ಮತ್ತು ಗೌಪ್ಯತೆ ನೀತಿಯನ್ನು ನೋಡಿ.

ನನ್ನ ಖಾತೆಯ ಉಸ್ತುವಾರಿ ಯಾರು?

ಸದ್ಯಕ್ಕೆ, ನಿಮ್ಮ Google ಖಾತೆಯನ್ನು ನಿರ್ವಹಿಸುವ ಜವಾಬ್ದಾರಿಯನ್ನು ನಿಮ್ಮ ಪೋಷಕರು ಹೊಂದಿದ್ದಾರೆ. ನಿಮ್ಮ ಖಾತೆಯನ್ನು ನೀವೇ ಬಳಸುವಷ್ಟು ದೊಡ್ಡವರಾಗುವವರೆಗೆ, Family Link ಎಂದು ಕರೆಯಬಹುದಾದ ಆ್ಯಪ್ ಅನ್ನು ಅವರು ಬಳಸಬಹುದು, ಇದು ನಿಮ್ಮ ಖಾತೆಯನ್ನು ನೀವೇ ನಿರ್ವಹಿಸುವಷ್ಟು ದೊಡ್ಡವರಾಗುವವರೆಗೆ ನಮ್ಮ ಖಾತೆಯನ್ನು ನಿರ್ವಹಿಸಲು ಸಹಾಯ ಆಗುತ್ತದೆ.

ನಿಮ್ಮ ಪೋಷಕರು ಇವುಗಳನ್ನು ಮಾಡಬಹುದು:

  • ನಿಮ್ಮ ಖಾತೆಗೆ ಸೈನ್ ಇನ್ ಮಾಡಿ, ನಿಮ್ಮ ಖಾತೆಯ ಪಾಸ್‌ವರ್ಡ್ ಬದಲಾಯಿಸುವುದು ಅಥವಾ ನಿಮ್ಮ ಖಾತೆಯನ್ನು ಅಳಿಸುವುದು.
  • ಫೋನ್‌ಗಳು ಅಥವಾ ಟ್ಯಾಬ್ಲೆಟ್‌ಗಳಂತಹ ನಿಮ್ಮ ಸಾಧನಗಳನ್ನು ನೀವು ಯಾವಾಗ ಮತ್ತು ಎಷ್ಟು ಬಳಸಬಹುದು ಎಂಬುದಕ್ಕೆ ಮಿತಿಗಳನ್ನು ಸೆಟ್ ಮಾಡುವುದು.
  • ನಿಮ್ಮ ಫೋನ್ ಅಥವಾ ಟ್ಯಾಬ್ಲೆಟ್ ಎಲ್ಲಿದೆ ಎಂದು ನೋಡುವುದು.
  • ನೀವು ಬಳಸಬಹುದಾದ ಆ್ಯಪ್‌ಗಳನ್ನು ಆಯ್ಕೆ ಮಾಡುವುದು.
  • ನಿಮ್ಮ ಆ್ಯಪ್‌ಗಳನ್ನು ನೀವು ಎಷ್ಟು ಸಮಯ ಬಳಸುತ್ತೀರಿ ಎಂಬುದನ್ನು ನೋಡುವುದು.
  • Google ಹುಡುಕಾಟ, YouTube ಅಥವಾ Google Play ನಂತಹ ಕೆಲವು Google ಆ್ಯಪ್‌ಗಳು ಮತ್ತು ಸೈಟ್‌ಗಳಿಗಾಗಿ ವಿಷಯ ಸೆಟ್ಟಿಂಗ್‌ಗಳನ್ನು ನಿರ್ವಹಿಸುವುದು. ಈ ಸೆಟ್ಟಿಂಗ್‌ಗಳನ್ನು ನೀವು ನೋಡುವದನ್ನು ಬದಲಾಯಿಸಬಹುದು.
  • ಈ ನಿಯಂತ್ರಣಗಳನ್ನು ನೀವೇ ನಿರ್ವಹಿಸುವುದನ್ನು ತಡೆಯುವುದು ಸೇರಿದಂತೆ, YouTube ಇತಿಹಾಸದಂತಹ ನಿಮ್ಮ ಖಾತೆಯ ಚಟುವಟಿಕೆ ನಿಯಂತ್ರಣಗಳನ್ನು ನಿರ್ವಹಿಸಿ.
  • ನಿಮ್ಮ ಫೋನ್ ಅಥವಾ ಟ್ಯಾಬ್ಲೆಟ್‌ನಲ್ಲಿನ ಆ್ಯಪ್‌ಗಳಿಗೆ ನೀಡಿರುವ ಅನುಮತಿಗಳನ್ನು ಪರಿಶೀಲಿಸಿ, ಆಪ್‌ಗಳು ನಿಮ್ಮ ಮೈಕ್ರೊಫೋನ್, ಕ್ಯಾಮರಾ ಅಥವಾ ಸಂಪರ್ಕಗಳನ್ನು ಬಳಸಬಹುದು.
  • ನಿಮ್ಮ ಹೆಸರು, ಲಿಂಗ ಅಥವಾ ಹುಟ್ಟಿದ ದಿನಾಂಕದಂತಹ ನಿಮ್ಮ ಖಾತೆಯ ಮಾಹಿತಿಯನ್ನು ವೀಕ್ಷಿಸಿ, ಬದಲಾಯಿಸಿ ಅಥವಾ ಅಳಿಸಿ.
  • Google Play ನಂತಹ ಕೆಲವು Google ಆ್ಯಪ್‌ಗಳು ಮತ್ತು ಸೈಟ್‌ಗಳಲ್ಲಿ ನಿಮ್ಮ ಡೌನ್‌ಲೋಡ್‌ಗಳು ಮತ್ತು ಖರೀದಿಗಳನ್ನು ಅನುಮೋದಿಸಿ.

Google ನನ್ನ ಮಾಹಿತಿಯನ್ನು ಹೇಗೆ ಮತ್ತು ಏಕೆ ಬಳಸುತ್ತದೆ?

ಹೆಚ್ಚಿನ ಸೈಟ್‌ಗಳು ಮತ್ತು ಆ್ಯಪ್‌ಗಳಂತೆ, ನೀವು ಅಥವಾ ಪೋಷಕರು ನಮಗೆ ನೀಡುವ ನಿಮ್ಮ ಹೆಸರು ಮತ್ತು ಹುಟ್ಟಿದ ದಿನಾಂಕ ಮಾಹಿತಿಯನ್ನು ನಾವು ಸಂಗ್ರಹಿಸುತ್ತೇವೆ ಮತ್ತು ನಮ್ಮ ಆ್ಯಪ್‌ಗಳು ಅಥವಾ ಸೈಟ್‌ಗಳನ್ನು ನೀವು ಬಳಸಿದಂತೆಲ್ಲಾ ನಾವು ಮಾಹಿತಿಯನ್ನು ಸಂಗ್ರಹಿಸುತ್ತೇವೆ. ಈ ಮಾಹಿತಿಯನ್ನು ಸುರಕ್ಷಿತವಾಗಿರಿಸಲು ನಾವು ಶ್ರಮಿಸುತ್ತೇವೆ ಮತ್ತು ನಮ್ಮ ಉತ್ಪನ್ನಗಳನ್ನು ನಿಮಗೆ ಹೆಚ್ಚು ಉಪಯುಕ್ತವಾಗಿಸುವಂತಹ ವಿಷಯಗಳಿಗಾಗಿ ನಾವು ಅದನ್ನು ಬಳಸುತ್ತೇವೆ. ಉದಾಹರಣೆಗೆ, ನಾವು ಇದಕ್ಕಾಗಿ ಡೇಟಾವನ್ನು ಸಂಗ್ರಹಿಸುತ್ತೇವೆ:

  • ನಮ್ಮ ಆ್ಯಪ್‌ಗಳು ಮತ್ತು ಸೈಟ್‌ಗಳನ್ನು ಕೆಲಸ ಮಾಡುವಂತೆ ಮಾಡಲು:ಉದಾಹರಣೆಗೆ, ನೀವು Google ಹುಡುಕಾಟದಲ್ಲಿ "ಕ್ರೀಡೆಗಳು" ಎಂದು ಹುಡುಕಿದರೆ, ನಾವು ನಿಮ್ಮ ಮಾಹಿತಿಯನ್ನು ಕ್ರೀಡೆಗಳ ಬಗ್ಗೆ ತೋರಿಸಲು ಬಳಸುತ್ತೇವೆ.
  • ನಮ್ಮ ಆ್ಯಪ್‌ಗಳು ಮತ್ತು ಸೈಟ್‌ಗಳನ್ನು ಉತ್ತಮವಾಗಿ ಮಾಡಲು: ಉದಾಹರಣೆಗೆ, ಏನಾದರೂ ದೋಷ ಕಂಡುಬಂದರೆ, ಅದನ್ನು ಸರಿಪಡಿಸಲು ನಾವು ಮಾಹಿತಿಯನ್ನು ಬಳಸಬಹುದು.
  • Google, ನಮ್ಮ ಬಳಕೆದಾರರು ಮತ್ತು ಸಾರ್ವಜನಿಕರನ್ನು ರಕ್ಷಿಸಲು: ಆನ್‌ಲೈನ್‌ನಲ್ಲಿ ಜನರನ್ನು ಸುರಕ್ಷಿತವಾಗಿರಿಸಲು ನಾವು ಮಾಹಿತಿಯನ್ನು ಬಳಸುತ್ತೇವೆ, ವಂಚನೆಯನ್ನು ಪತ್ತೆ ಮಾಡುವುದು ಮತ್ತು ತಡೆಗಟ್ಟಲು.
  • ಹೊಸ ಆ್ಯಪ್‌ಗಳು ಮತ್ತು ಸೈಟ್‌ಗಳನ್ನು ನಿರ್ಮಿಸಲು: ನಾವು ನಿರ್ಮಿಸಬಹುದಾದ ಹೊಸ Google ಉತ್ಪನ್ನಗಳ ಕಲ್ಪನೆಗಳನ್ನು ಪಡೆಯಲು ಜನರು ನಮ್ಮ ಪ್ರಸ್ತುತ ಆ್ಯಪ್‌ಗಳು ಮತ್ತು ಸೈಟ್‌ಗಳನ್ನು ಹೇಗೆ ಬಳಸುತ್ತಾರೆ ಎಂಬುದನ್ನು ನಾವು ತಿಳಿದುಕೊಳ್ಳಲು.
  • ನಿಮಗಾಗಿ ಮಾಹಿತಿಯನ್ನು ವೈಯಕ್ತಿಕರಿಸಲು, ಇದರರ್ಥ ನೀವು ಏನನ್ನು ಇಷ್ಟಪಡಬಹುದು ಎಂದು ನಾವು ಭಾವಿಸುತ್ತೇವೋ ಅದನ್ನು ತೋರಿಸಲು. ಉದಾಹರಣೆಗೆ, ನೀವು YouTube Kids ನಲ್ಲಿ ಪ್ರಾಣಿಗಳ ವೀಡಿಯೋಗಳನ್ನು ನೋಡಲು ಬಯಸಿದರೆ ವೀಕ್ಷಿಸಲು ನಾವು ಹೆಚ್ಚಿನ ವೀಡಿಯೊಗಳನ್ನು ಶಿಫಾರಸು ಮಾಡಬಹುದು.
  • ನೀವು ಬಳಸುತ್ತಿರುವ ಸೈಟ್‌ನಂತಹ ವಿಷಯಗಳನ್ನು ಆಧರಿಸಿ ನಿಮಗೆ ಜಾಹೀರಾತುಗಳನ್ನು ತೋರಿಸಲು.
  • ನಿಮ್ಮೊಂದಿಗೆ ಸಂವಹನ ಮಾಡಲು: ಉದಾಹರಣೆಗೆ, ಭದ್ರತಾ ಸಮಸ್ಯೆ ಇದ್ದಲ್ಲಿ ನಾವು ನಿಮಗೆ ಸಂದೇಶ ಕಳುಹಿಸಲು ನಿಮ್ಮ ಇಮೇಲ್ ವಿಳಾಸವನ್ನು ಬಳಸಬಹುದು. ನಿಮಗೆ ಪರಿಚಯವಿಲ್ಲದವರಿಂದ ಬರುವ ಸಂದೇಶವನ್ನು ತೆರೆಯುವ ಮೊದಲು, ನಿಮ್ಮ ಪೋಷಕರನ್ನು ಕೇಳಲು ಮರೆಯದಿರಿ.

ಏನನ್ನು ಉಳಿಸಬೇಕೆಂದು ನಾನು Google ಗೆ ಹೇಳಬಹುದೇ?

ಹೌದು, ನಿಮ್ಮ ಕುರಿತು ನಾವು ಉಳಿಸುವ ಕೆಲವು ವಿಷಯಗಳನ್ನು ನೀವು ಬದಲಾಯಿಸಬಹುದು. ಉದಾಹರಣೆಗೆ, ನಾವು ನಿಮ್ಮ YouTube ಇತಿಹಾಸವನ್ನು ನಿಮ್ಮ Google ಖಾತೆಗೆ ಉಳಿಸಲು ನೀವು ಬಯಸದಿದ್ದರೆ, ನೀವು YouTube ಇತಿಹಾಸವನ್ನು ಆಫ್ ಮಾಡಬಹುದು. ಚಟುವಟಿಕೆ ನಿಯಂತ್ರಣಗಳಂತಹ ನಿಮ್ಮ ಕೆಲವು ಗೌಪ್ಯತೆ ಸೆಟ್ಟಿಂಗ್‌ಗಳಿಗೆ ನೀವು ಬದಲಾವಣೆಗಳನ್ನು ಮಾಡಿದರೆ, ನಾವು ನಿಮ್ಮ ಪೋಷಕರಿಗೆ ತಿಳಿಸುತ್ತೇವೆ. ಅವರು ನಿಮ್ಮ ಸೆಟ್ಟಿಂಗ್‌ಗಳನ್ನು ಬದಲಾಯಿಸಲು, ಸಹ ನಿಮಗೆ ಸಹಾಯ ಮಾಡಬಹುದು.

ನಿಮ್ಮ ಮತ್ತು ನಿಮ್ಮ Google ಖಾತೆಯ ಕುರಿತು ಕೆಲವು ಮಾಹಿತಿಯನ್ನು ನೀವು ಮತ್ತು ನಿಮ್ಮ ಪೋಷಕರು ಯಾವಾಗಲೂ ನೋಡಬಹುದು ಮತ್ತು ನಿರ್ವಹಿಸಬಹುದು.

Google ಎಂದಾದರೂ ನನ್ನ ವೈಯಕ್ತಿಕ ಮಾಹಿತಿಯನ್ನು ಇತರರೊಂದಿಗೆ ಹಂಚಿಕೊಳ್ಳುತ್ತದೆಯೇ?

Google ನ ಹೊರಗೆ ನಿಮ್ಮ ಹೆಸರು ಮತ್ತು ಇಮೇಲ್ ವಿಳಾಸದಂತಹ ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ಹಂಚಿಕೊಳ್ಳಲು ಕೆಲವು ಕಾರಣಗಳಿವೆ. ನಾವು ಈ ಮಾಹಿತಿಯನ್ನು ಹಂಚಿಕೊಂಡರೆ, ಅದನ್ನು ರಕ್ಷಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ.

ನಾವು ಕೆಲವು ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬಹುದು:

  • Google ನಲ್ಲಿ ನಿಮ್ಮ ಪೋಷಕರು ಮತ್ತು ಕುಟುಂಬ ಗುಂಪಿನ ಜೊತೆಗೆ
  • ನಾವು ಕೆಲಸ ಮಾಡುವ ಕಂಪನಿಗಳ ಜೊತೆಗೆ
  • ಹಂಚಿಕೊಳ್ಳಲು ತೊಂದರೆಯಿಲ್ಲ ಎಂದು ನಿಮ್ಮ ಪೋಷಕರು ನಮಗೆ ಹೇಳಿದಾಗ
  • ಕಾನೂನಿನ ಕಾರಣಗಳಿಗಾಗಿ ನಮಗೆ ಬೇಕಾದಾಗ

ನಾನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳುವುದನ್ನು ಬೇರೆ ಯಾರು ನೋಡಬಹುದು?

ಇಮೇಲ್‌ಗಳು ಅಥವಾ ಫೋಟೋಗಳಂತಹ ನೀವು ಆನ್‌ಲೈನ್‌ನಲ್ಲಿ ಹಂಚಿಕೊಳ್ಳುವ ಯಾವುದನ್ನಾದರೂ ಬಹಳಷ್ಟು ಜನರು ನೋಡಬಹುದು. ಒಮ್ಮೆ ಏನನ್ನಾದರೂ ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ, ಅದನ್ನು ತೆಗೆದುಹಾಕಲು ಕಷ್ಟವಾಗುತ್ತದೆ. ನೀವು ನಂಬುವ ಜನರ ಜೊತೆಗೆ ಮಾತ್ರ ಹಂಚಿಕೊಳ್ಳಿ. ನಿಮಗೆ ಖಚಿತವಿಲ್ಲದಿದ್ದರೆ, ಪೋಷಕರು ಅಥವಾ ಕುಟುಂಬದ ಸದಸ್ಯರನ್ನು ಕೇಳಿ.

ಇನ್ನಷ್ಟು ತಿಳಿಯಲು ಬಯಸುವಿರಾ? ನಮ್ಮ ಗೌಪ್ಯತೆ ನೀತಿ ಅನ್ನು ಓದಲು ನಿಮಗೆ ಸಹಾಯ ಮಾಡಲು ನಿಮ್ಮ ಪೋಷಕರನ್ನು ಕೇಳಿ.

Google ನಲ್ಲಿ ನಿಮ್ಮ ಗೌಪ್ಯತೆಯ ಬಗ್ಗೆ ತಿಳಿಯಲು ಬಯಸುವಿರಾ?

ನೀವು ನಮ್ಮ ಆ್ಯಪ್‌ಗಳು ಮತ್ತು ಸೈಟ್‌ಗಳನ್ನು ಬಳಸುವಾಗ Google ಹೇಗೆ ಮಾಹಿತಿಯನ್ನು ಸಂಗ್ರಹಿಸುತ್ತದೆ ಮತ್ತು ಬಳಸುತ್ತದೆ ಎಂಬುದನ್ನು ನೀವು ಇಲ್ಲಿ ತಿಳಿಯಬಹುದು. ನಿಮ್ಮ Google ಖಾತೆ ಮತ್ತು ಸಾಧನಗಳನ್ನು ನಿರ್ವಹಿಸಲು ನಿಮ್ಮ ಪೋಷಕರು ಹೇಗೆ ಸಹಾಯ ಮಾಡಬಹುದು ಎಂಬುದನ್ನು ಸಹ ನೀವು ತಿಳಿಯುತ್ತೀರಿ.

ಈ ಮಾಹಿತಿಯು, ಕನಿಷ್ಠ ವಯಸ್ಸಿನ ಅವಶ್ಯಕತೆಯಿರುವ ಮಕ್ಕಳು ಮತ್ತು ಹದಿಹರೆಯದವರು ತಮ್ಮ ಸ್ವಂತ ಖಾತೆಯನ್ನು ನಿರ್ವಹಿಸಲು Family Link ಮೂಲಕ ನಿರ್ವಹಿಸಲಾಗುವ Google ಖಾತೆಗಳಿಗೆ, ಮಾತ್ರ ಅನ್ವಯಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ, ನಮ್ಮ ಗೌಪ್ಯತೆ ಸೂಚನೆ ಮತ್ತು ಗೌಪ್ಯತೆ ನೀತಿ ಅನ್ನು ನೋಡಿ.

ನನ್ನ ಪೋಷಕರು ನನ್ನ ಖಾತೆಯನ್ನು ನಿರ್ವಹಿಸಲು ಸಹಾಯ ಮಾಡಬಹುದೇ?

ನಿಮ್ಮ ಪೋಷಕರು ನಿಮ್ಮ Google ಖಾತೆಯ ಎಲ್ಲಾ ಅಂಶಗಳನ್ನು ನಿರ್ವಹಿಸಲು ನಿಮಗೆ ಸಹಾಯ ಮಾಡಲು Family Link ಎಂಬ ಆ್ಯಪ್ ಅನ್ನು ಬಳಸಬಹುದು. ನಿಮ್ಮ ಸಾಧನವನ್ನು ಅವಲಂಬಿಸಿ, ಅವರು ಈ ರೀತಿಯ ಕೆಲಸಗಳನ್ನು ಮಾಡಬಹುದು:

  • ನಿಮ್ಮ ಖಾತೆಗೆ ಸೈನ್ ಇನ್ ಮಾಡಿ, ನಿಮ್ಮ ಖಾತೆಯ ಪಾಸ್‌ವರ್ಡ್ ಬದಲಾಯಿಸುವುದು ಅಥವಾ ನಿಮ್ಮ ಖಾತೆಯನ್ನು ಅಳಿಸುವುದು.
  • ನಿಮ್ಮ ಸಾಧನಗಳನ್ನು ನೀವು ಎಷ್ಟರ ಮಟ್ಟಿಗೆ ಮತ್ತು ಯಾವಾಗ ಬಳಸಬಹುದು ಎಂಬ ಮಿತಿಗಳನ್ನು ಸೆಟ್ ಮಾಡಲು.
  • ಲಾಗ್ ಇನ್ ಮಾಡಿರುವ ಸಾಧನಗಳು ಮತ್ತು ಸಕ್ರಿಯವಾಗಿರುವ ಸಾಧನಗಳ ಸ್ಥಳವನ್ನು ವೀಕ್ಷಿಸಲು.
  • ನಿಮ್ಮ ಆ್ಯಪ್‌ಗಳನ್ನು ನಿರ್ವಹಿಸಲು ಮತ್ತು ನೀವು ಅವುಗಳನ್ನು ಎಷ್ಟು ಬಳಸುತ್ತೀರಿ ಎಂಬುದನ್ನು ನೋಡಲು.
  • Google ಹುಡುಕಾಟ, YouTube ಅಥವಾ Google Play ನಂತಹ ಕೆಲವು Google ಆ್ಯಪ್‌ಗಳು ಮತ್ತು ಸೈಟ್‌ಗಳಿಗಾಗಿ ವಿಷಯ ಸೆಟ್ಟಿಂಗ್‌ಗಳನ್ನು ನಿರ್ವಹಿಸುವುದು. ಈ ಸೆಟ್ಟಿಂಗ್‌ಗಳನ್ನು ನೀವು ನೋಡುವದನ್ನು ಬದಲಾಯಿಸಬಹುದು.
  • ಈ ನಿಯಂತ್ರಣಗಳನ್ನು ನೀವೇ ನಿರ್ವಹಿಸುವುದನ್ನು ತಡೆಯುವುದು ಸೇರಿದಂತೆ, YouTube ಇತಿಹಾಸದಂತಹ ನಿಮ್ಮ ಖಾತೆಯ ಚಟುವಟಿಕೆ ನಿಯಂತ್ರಣಗಳನ್ನು ನಿರ್ವಹಿಸಿ.
  • ನಿಮ್ಮ ಸಾಧನದಲ್ಲಿನ ಆ್ಯಪ್‌ಗಳಿಗೆ ನೀಡಿರುವ ಅನುಮತಿಗಳನ್ನು ಪರಿಶೀಲಿಸಿ, ಆಪ್‌ಗಳು ನಿಮ್ಮ ಮೈಕ್ರೊಫೋನ್, ಕ್ಯಾಮರಾ ಅಥವಾ ಸಂಪರ್ಕಗಳನ್ನು ಬಳಸಬಹುದು.
  • ನಿಮ್ಮ ಹೆಸರು, ಲಿಂಗ ಅಥವಾ ಹುಟ್ಟಿದ ದಿನಾಂಕದಂತಹ ನಿಮ್ಮ ಖಾತೆಯ ಮಾಹಿತಿಯನ್ನು ವೀಕ್ಷಿಸಿ, ಬದಲಾಯಿಸಿ ಅಥವಾ ಅಳಿಸಿ.
  • Google Play ನಂತಹ ಕೆಲವು Google ಆ್ಯಪ್‌ಗಳು ಮತ್ತು ಸೈಟ್‌ಗಳಲ್ಲಿ ನಿಮ್ಮ ಡೌನ್‌ಲೋಡ್‌ಗಳು ಮತ್ತು ಖರೀದಿಗಳನ್ನು ಅನುಮೋದಿಸಿ.

ನನ್ನ ಮಾಹಿತಿಯನ್ನು Google ಹೇಗೆ ಮತ್ತು ಏಕೆ ಸಂಗ್ರಹಿಸುತ್ತದೆ ಮತ್ತು ಬಳಸುತ್ತದೆ?

ಹೆಚ್ಚಿನ ಸೈಟ್‌ಗಳು ಮತ್ತು ಆ್ಯಪ್‌ಗಳಂತೆ, ನೀವು ಅಥವಾ ಪೋಷಕರು ನಮಗೆ ನೀಡುವ ನಿಮ್ಮ ಹೆಸರು ಮತ್ತು ಹುಟ್ಟಿದ ದಿನಾಂಕ ಮಾಹಿತಿಯನ್ನು ನಾವು ಸಂಗ್ರಹಿಸುತ್ತೇವೆ ಮತ್ತು ನಮ್ಮ ಆ್ಯಪ್‌ಗಳು ಅಥವಾ ಸೈಟ್‌ಗಳನ್ನು ನೀವು ಬಳಸಿದಂತೆಲ್ಲಾ ನಾವು ಮಾಹಿತಿಯನ್ನು ಸಂಗ್ರಹಿಸುತ್ತೇವೆ. ಈ ಮಾಹಿತಿಯನ್ನು ಸುರಕ್ಷಿತವಾಗಿರಿಸಲು ನಾವು ಶ್ರಮಿಸುತ್ತೇವೆ ಮತ್ತು ನಮ್ಮ ಉತ್ಪನ್ನಗಳನ್ನು ನಿಮಗೆ ಹೆಚ್ಚು ಉಪಯುಕ್ತವಾಗಿಸುವಂತಹ ವಿಷಯಗಳಿಗಾಗಿ ನಾವು ಅದನ್ನು ಬಳಸುತ್ತೇವೆ. ಉದಾಹರಣೆಗೆ, ನಾವು ಇದಕ್ಕಾಗಿ ಡೇಟಾವನ್ನು ಸಂಗ್ರಹಿಸುತ್ತೇವೆ:

  • Google, ನಮ್ಮ ಬಳಕೆದಾರರು ಮತ್ತು ಸಾರ್ವಜನಿಕರನ್ನು ರಕ್ಷಿಸಲು: ಜನರನ್ನು ಆನ್‌ಲೈನ್‌ನಲ್ಲಿ ಹೆಚ್ಚು ಸುರಕ್ಷಿತವಾಗಿರಿಸಲು ನಾವು ಡೇಟಾವನ್ನು ಬಳಸುತ್ತೇವೆ, ಉದಾಹರಣೆಗೆ ವಂಚನೆಯನ್ನು ಪತ್ತೆಹಚ್ಚಲು ಮತ್ತು ತಡೆಯಲು.
  • ನಮ್ಮ ಸೇವೆಗಳನ್ನು ಒದಗಿಸಲು: ಫಲಿತಾಂಶಗಳನ್ನು ಪಡೆಯಲು ಹುಡುಕಾಟ ಮಾಡುವಾಗ ನೀವು ಬಳಸುವ ಪದಗಳನ್ನು ಸಂಸ್ಕರಿಸುವಂತಹ ನಮ್ಮ ಸೇವೆಗಳನ್ನು ಒದಗಿಸಲು ನಾವು ಡೇಟಾವನ್ನು ಬಳಸುತ್ತೇವೆ.
  • ನಮ್ಮ ಸೇವೆಗಳನ್ನು ನಿರ್ವಹಿಸಿ ಮತ್ತು ಸುಧಾರಿಸಿ: ಉದಾಹರಣೆಗೆ, ನಮ್ಮ ಪ್ರಾಡಕ್ಟ್‌ಗಳು ಸಾಮಾನ್ಯವಾಗಿ ಕೆಲಸ ಮಾಡುವುದನ್ನು ನಿಲ್ಲಿಸಿದಾಗ ನಾವು ಟ್ರ್ಯಾಕ್ ಮಾಡಬಹುದು. ಯಾವ ಹುಡುಕಾಟ ಪದಗಳನ್ನು ಸಾಮಾನ್ಯವಾಗಿ ತಪ್ಪಾಗಿ ಬರೆಯಲಾಗಿದೆ ಎಂದು ತಿಳಿದುಕೊಳ್ಳುವುದರ ಮೂಲಕ ನಮ್ಮ ಸೇವೆಗಳಲ್ಲಿ ಬಳಸಲಾಗುವ ಕಾಗುಣಿತ ಪರೀಕ್ಷಾ ವೈಶಿಷ್ಟ್ಯಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ.
  • ಹೊಸ ಸೇವೆಗಳನ್ನು ಡೆವಲಪ್ ಮಾಡಲು: ಹೊಸ ಸೇವೆಗಳನ್ನು ಅಭಿವೃದ್ಧಿಪಡಿಸಲು ಡೇಟಾ ನಮಗೆ ಸಹಾಯ ಮಾಡುತ್ತದೆ. ಉದಾಹರಣೆಗೆ, Google ನ ಮೊದಲ ಫೋಟೋಗಳ ಆ್ಯಪ್ ಆಗಿರುವ Picasa ದಲ್ಲಿ ಜನರು ತಮ್ಮ ಫೋಟೋಗಳನ್ನು ಹೇಗೆ ವ್ಯವಸ್ಥಿತಗೊಳಿಸುತ್ತಾರೆ ಎನ್ನುವುದನ್ನು ಅರ್ಥಮಾಡಿಕೊಂಡ ಕಾರಣ, Google Photos ಆ್ಯಪ್ ಅನ್ನು ವಿನ್ಯಾಸಗೊಳಿಸಿ, ಪ್ರಾರಂಭಿಸಲು ನಮಗೆ ಸಾಧ್ಯವಾಯಿತು.
  • ವಿಷಯವನ್ನು ವೈಯಕ್ತೀಕರಿಸಲು, ಅಂದರೆ ಇದರರ್ಥ ನೀವು ಏನನ್ನು ಇಷ್ಟಪಡಬಹುದು ಎಂದು ನಾವು ಭಾವಿಸುತ್ತೇವೋ ಅದನ್ನು ತೋರಿಸುವುದು. ಉದಾಹರಣೆಗೆ, ನೀವು YouTube ನಲ್ಲಿ ಕ್ರೀಡಾ ವೀಡಿಯೊಗಳನ್ನು ವೀಕ್ಷಿಸಲು ಬಯಸಿದರೆ, ವೀಕ್ಷಿಸಲು ನಾವು ಹೆಚ್ಚು ವೀಡಿಯೊಗಳನ್ನು ಶಿಫಾರಸು ಮಾಡಬಹುದು.
  • ನಿಮಗೆ ಜಾಹೀರಾತುಗಳನ್ನು ತೋರಿಸಲು ನೀವು ಭೇಟಿ ನೀಡುತ್ತಿರುವ ಸೈಟ್, ನೀವು ನಮೂದಿಸಿರುವ ಹುಡುಕಾಟ ಪದಗಳು ಅಥವಾ ನಿಮ್ಮ ನಗರ ಹಾಗೂ ರಾಜ್ಯದಂತಹ ಮಾಹಿತಿಯ ಆಧಾರದ ಮೇಲೆ ಜಾಹೀರಾತುಗಳನ್ನು ತೋರಿಸಬಹುದು.
  • ಕಾರ್ಯಕ್ಷಮತೆಯನ್ನು ಅಳೆಯಲು: ಕಾರ್ಯಕ್ಷಮತೆಯನ್ನು ಅಳೆಯಲು ಮತ್ತು ನಮ್ಮ ಸೇವೆಗಳನ್ನು ಹೇಗೆ ಬಳಸಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಾವು ಡೇಟಾವನ್ನು ಬಳಸುತ್ತೇವೆ.
  • ನಿಮ್ಮೊಂದಿಗೆ ಸಂವಹನ ಮಾಡಲು: ಉದಾಹರಣೆಗೆ, ನಾವು ಅನುಮಾನಾಸ್ಪದ ಚಟುವಟಿಕೆಯನ್ನು ಪತ್ತೆ ಮಾಡಿದರೆ ನಿಮಗೆ ಅಧಿಸೂಚನೆಯನ್ನು ಕಳುಹಿಸಲು ನಾವು ನಿಮ್ಮ ಇಮೇಲ್ ವಿಳಾಸವನ್ನು ಬಳಸಬಹುದು.

Google ಯಾವ ವಿಷಯವನ್ನು ಉಳಿಸುತ್ತದೆ ಎಂಬುದನ್ನು ನಾನು ಹೇಗೆ ನಿರ್ಧರಿಸುವುದು?

ನಿಮ್ಮ ಸೆಟ್ಟಿಂಗ್‌ಗಳ ಮೂಲಕ, ನಾವು ಸಂಗ್ರಹಿಸುವ ಡೇಟಾವನ್ನು ಮತ್ತು ಆ ಡೇಟಾವನ್ನು ಹೇಗೆ ಬಳಸಲಾಗುತ್ತದೆ ಎಂಬುದನ್ನು ನೀವು ಮಿತಿಗೊಳಿಸಬಹುದು. ಉದಾಹರಣೆಗೆ, ನಾವು ನಿಮ್ಮ YouTube ಇತಿಹಾಸವನ್ನು ನಿಮ್ಮ Google ಖಾತೆಗೆ ಉಳಿಸಲು ನೀವು ಬಯಸದಿದ್ದರೆ, ನೀವು YouTube ಇತಿಹಾಸವನ್ನು ಆಫ್ ಮಾಡಬಹುದು. ನಿಮ್ಮ ಚಟುವಟಿಕೆ ನಿಯಂತ್ರಣಗಳಲ್ಲಿ ನೀವು ಬದಲಾವಣೆಗಳನ್ನು ಮಾಡಿದರೆ ನಿಮ್ಮ ಪೋಷಕರಿಗೆ ಸೂಚಿಸಲಾಗುತ್ತದೆ. ನಿಮ್ಮ ಗೌಪ್ಯತೆ ಸೆಟ್ಟಿಂಗ್‌ಗಳ ಕುರಿತು ಇನ್ನಷ್ಟು ತಿಳಿಯಿರಿ

ನಿಮ್ಮ ಮತ್ತು ನಿಮ್ಮ Google ಖಾತೆಯ ಕುರಿತು ಕೆಲವು ಮಾಹಿತಿಯನ್ನು ನೀವು ಯಾವಾಗಲೂ ನೋಡಬಹುದು ಮತ್ತು ನಿರ್ವಹಿಸಬಹುದು.

Google ಎಂದಾದರೂ ನನ್ನ ವೈಯಕ್ತಿಕ ಮಾಹಿತಿಯನ್ನು ಇತರರೊಂದಿಗೆ ಹಂಚಿಕೊಳ್ಳುತ್ತದೆಯೇ?

ನಾವು ಕಾನೂನುಬದ್ಧವಾಗಿ ಅಗತ್ಯವಿರುವಂತಹ ಸೀಮಿತ ಸಂದರ್ಭಗಳನ್ನು ಹೊರತುಪಡಿಸಿ, Google ಹೊರತುಪಡಿಸಿ ಇತರ ಕಂಪನಿಗಳು, ಸಂಸ್ಥೆಗಳು ಅಥವಾ ವ್ಯಕ್ತಿಗಳೊಂದಿಗೆ ನಾವು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವುದಿಲ್ಲ. ನಾವು ಈ ಮಾಹಿತಿಯನ್ನು ಹಂಚಿಕೊಂಡರೆ, ಅದನ್ನು ರಕ್ಷಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ.

ನಾವು ಕೆಲವು ವೈಯಕ್ತಿಕ ಮಾಹಿತಿಯನ್ನು ಇವರುಗಳೊಂದಿಗೆ ಹಂಚಿಕೊಳ್ಳಬಹುದು:

  • ನಿಮ್ಮ ಪೋಷಕರು ಮತ್ತು Google ನಲ್ಲಿರುವ ಕುಟುಂಬ ಗುಂಪು.
  • ​​ನೀವು ಮತ್ತು ನಿಮ್ಮ ಪೋಷಕರು ನಮಗೆ ಅನುಮತಿ ನೀಡಿದಾಗ ಅಥವಾ ಕಾನೂನು ಕಾರಣಗಳಿಗಾಗಿ. ವೈಯಕ್ತಿಕ ಮಾಹಿತಿಯನ್ನು ಒದಗಿಸುವುದು ಅಗತ್ಯವೆಂದು ನಾವು ಭಾವಿಸಿದರೆ, ನಾವು Google ನ ಹೊರಗೆ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುತ್ತೇವೆ:
  • ಅನ್ವಯವಾಗುವ ಯಾವುದೇ ಕಾನೂನು, ನಿಯಮ, ಕಾನೂನು ಪ್ರಕ್ರಿಯೆ ಅಥವಾ ಜಾರಿಗೊಳಿಸಬಹುದಾದ ಸರಕಾರಿ ವಿನಂತಿಯನ್ನು ಪೂರೈಸಲು.
  • ಸಂಭಾವ್ಯ ಉಲ್ಲಂಘನೆಗಳ ಕುರಿತಾದ ತನಿಖೆಯೂ ಸೇರಿದಂತೆ ಅನ್ವಯಿಸುವ ಸೇವಾ ನಿಯಮಗಳನ್ನು ಜಾರಿಗೊಳಿಸಲು.
  • ವಂಚನೆ, ಸುರಕ್ಷತೆ ಅಥವಾ ತಾಂತ್ರಿಕ ಸಮಸ್ಯೆಗಳನ್ನು ಪತ್ತೆಹಚ್ಚಲು, ತಡೆಗಟ್ಟಲು ಇಲ್ಲವೇ ಬಗೆಹರಿಸಲು.
  • ಕಾನೂನಿನ ಆವಶ್ಯಕತೆಯ ಮೇರೆಗೆ ಅಥವಾ ಅನುಮತಿಯ ಮೇರೆಗೆ, Google, ನಮ್ಮ ಬಳಕೆದಾರರು ಅಥವಾ ಸಾರ್ವಜನಿಕರ ಹಕ್ಕುಗಳು, ಆಸ್ತಿ ಅಥವಾ ಸುರಕ್ಷತೆಗೆ ಹಾನಿಯಾಗದಂತೆ ಸಂರಕ್ಷಿಸಲು.
  • ಬಾಹ್ಯ ಪ್ರಕ್ರಿಯೆಗಾಗಿ. ನಾವು ಅವರಿಗೆ ನೀಡುವ ಸೂಚನೆಗಳ ಆಧಾರದ ಮೇಲೆ ಡೇಟಾವನ್ನು ಪ್ರಕ್ರಿಯೆಗೊಳಿಸಲು ನಾವು ಕೆಲಸ ಮಾಡುವ ಕಂಪನಿಗಳಿಗೆ ವೈಯಕ್ತಿಕ ಮಾಹಿತಿಯನ್ನು ಒದಗಿಸುತ್ತೇವೆ. ಉದಾಹರಣೆಗೆ, ಗ್ರಾಹಕರ ಬೆಂಬಲವನ್ನು ಒದಗಿಸಲು ನಮಗೆ ಸಹಾಯ ಮಾಡಲು ನಾವು ಬಾಹ್ಯ ಕಂಪನಿಯನ್ನು ಬಳಸುತ್ತೇವೆ ಮತ್ತು ಬಳಕೆದಾರರ ಪ್ರಶ್ನೆಗಳಿಗೆ ಉತ್ತರಿಸಲು ಆ ಕಂಪನಿಯೊಂದಿಗೆ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಕು.

ನಾನು ಹಂಚಿಕೊಳ್ಳುವ ಫೋಟೋಗಳು, ಇಮೇಲ್‌ಗಳು ಮತ್ತು ಡಾಕ್ಯುಮೆಂಟ್‌ಗಳಂತಹ ವಿಷಯವನ್ನು ಬೇರೆ ಯಾರು ನೋಡಬಹುದು?

ನೀವು ಬಳಸುವ Google ಆ್ಯಪ್‌ಗಳು ಮತ್ತು ಸೈಟ್‌ಗಳಲ್ಲಿ ನಿರ್ದಿಷ್ಟ ವಿಷಯವನ್ನು ಇತರ ಜನರ ಜೊತೆಗೆ ಹಂಚಿಕೊಳ್ಳಲು ನೀವು ಆಯ್ಕೆ ಮಾಡಬಹುದು.

ನೀವು ಹಂಚಿಕೊಳ್ಳುವಾಗ, ಇತರ ಜನರು ಆ್ಯಪ್‌ಗಳಲ್ಲಿ ಮತ್ತು Google ನ ಹೊರಗಿನ ಸೈಟ್‌ಗಳಲ್ಲಿ ಕೂಡ ಮರುಹಂಚಿಕೊಳ್ಳಲು ಸಾಧ್ಯವಾಗುತ್ತದೆ ಎಂಬುದನ್ನು ನೆನಪಿಡಿ.

ನೀವು ಯಾವಾಗ ಬೇಕಾದರೂ ನಿಮ್ಮ ಸ್ವಂತ ಖಾತೆಯನ್ನು ನಿಮ್ಮ ಖಾತೆಯಿಂದ ಅಳಿಸಬಹುದು, ಆದರೆ ಇದು ನೀವು ಈಗಾಗಲೇ ಹಂಚಿಕೊಂಡಿರುವ ನಕಲುಗಳನ್ನು ಅಳಿಸುವುದಿಲ್ಲ.

ನೀವು ಏನನ್ನು ಹಂಚಿಕೊಳ್ಳುತ್ತೀರಿ ಎಂಬುದರ ಕುರಿತು ಜಾಗರೂಕರಾಗಿರಿ ಮತ್ತು ನೀವು ನಂಬುವ ಜನರ ಜೊತೆಗೆ ಮಾತ್ರ ಹಂಚಿಕೊಳ್ಳಿ.

ಈ ವಿಷಯಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ನೀವು ಯಾವಾಗಲೂ ನಮ್ಮ ಗೌಪ್ಯತೆ ನೀತಿ ಅನ್ನು ಪರಿಶೀಲಿಸಬಹುದು.