ನಿಮ್ಮ ಸಾಧನದ ಹೊಂದಾಣಿಕೆಯನ್ನು ಪರಿಶೀಲಿಸಿ
ಮಕ್ಕಳಿಗಾಗಿ ಮತ್ತು ಹದಿಹರೆಯದವರಿಗಾಗಿ
Family Link ಮೇಲ್ವಿಚಾರಣೆಯು, 7.0 (Nougat) ಮತ್ತು ಹೆಚ್ಚಿನ ಆವೃತ್ತಿ ಹೊಂದಿರುವ Android ಸಾಧನಗಳಲ್ಲಿ ರನ್ ಆಗುತ್ತದೆ. Android ಆವೃತ್ತಿಗಳಾದ 5.0 ಮತ್ತು 6.0 (Lollipop ಮತ್ತು Marshmallow) ರನ್ ಆಗುತ್ತಿರುವ ಸಾಧನಗಳಿಗೂ ಸಹ Family Link ಸೆಟ್ಟಿಂಗ್ಗಳನ್ನು ಅನ್ವಯಿಸಲು ಸಾಧ್ಯವಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ, ನಮ್ಮ ಸಹಾಯ ಕೇಂದ್ರಕ್ಕೆ ಭೇಟಿ ನೀಡಿ.
ಪೋಷಕರಿಗಾಗಿ
5.0 (Lollipop) ಅಥವಾ ಅದಕ್ಕಿಂತ ಹೆಚ್ಚಿನ ಆವೃತ್ತಿಗಳು ರನ್ ಆಗುತ್ತಿರುವ Android ಸಾಧನಗಳಲ್ಲಿ ಮತ್ತು iOS 11 ಹಾಗೂ ಅದಕ್ಕಿಂತ ಹೆಚ್ಚಿನ ಆವೃತ್ತಿ ರನ್ ಆಗುತ್ತಿರುವ iPhone ಗಳಲ್ಲಿ ಪೋಷಕರು Family Link ಅನ್ನು ರನ್ ಮಾಡಬಹುದು.
ನೀವು ರನ್ ಮಾಡುತ್ತಿರುವ Android ಆವೃತ್ತಿ ಯಾವುದು ಎಂಬುದನ್ನು ನೋಡಿ
1. ನಿಮ್ಮ Android ಸಾಧನದಲ್ಲಿ ಸೆಟ್ಟಿಂಗ್ಗಳ ಆ್ಯಪ್ ತೆರೆಯಿರಿ.
2. ಕೆಳಗಿನವರೆಗೆ ಸ್ಕ್ರಾಲ್ ಮಾಡಿ.
3. ನಿಮ್ಮ ಆವೃತ್ತಿ ಸಂಖ್ಯೆ ನೋಡಲು, ಫೋನ್ ಕುರಿತು ಅಥವಾ ಟ್ಯಾಬ್ಲೆಟ್ ಕುರಿತು ಎಂಬುದನ್ನು ಟ್ಯಾಪ್ ಮಾಡಿ.
Chromebook ನಲ್ಲೂ ಸಹ Family Link ರನ್ ಆಗುತ್ತದೆ
ನಿಮ್ಮ ಮಗುವು ತನ್ನ ಸ್ವಂತ ಖಾತೆಯಿಂದ Chromebook ಗೆ ಸೈನ್ ಇನ್ ಮಾಡಿದಾಗ ಅದು ನಿಮಗೆ ತಿಳಿದಿರಲಿ. Family Link ಮೇಲ್ವಿಚಾರಣೆಯು, Chrome OS ಆವೃತ್ತಿ 71 ಅಥವಾ ಅದಕ್ಕಿಂತ ಹೆಚ್ಚಿನ ಆವೃತ್ತಿ ಹೊಂದಿರುವ Chromebook ಗಳಲ್ಲಿ ರನ್ ಆಗುತ್ತದೆ.
ಇನ್ನಷ್ಟು ತಿಳಿಯಿರಿ